Posted by: ರಮ್ಯ | ಜುಲೈ 20, 2009

ಅಪರಿಚಿತ ದೇಶದಲ್ಲಿ

ಮದುವೆಯಾಗಿ 15 ದಿನದಲ್ಲಿ ಅಮೇರಿಕದಲ್ಲಿದ್ದೆ. ಕೈನಲ್ಲಿದ್ದ ಕೆಲಸ ಬಿಟ್ಟು ಇಲ್ಲಿ ನಿರುದ್ಯೋಗಿ ಆಗಿದ್ದೆ. ಸಾಮಾನ್ಯವಾಗಿ ಎಲ್ಲ ವಿಷಯಗಳಲ್ಲೂ ಭಾರತಕ್ಕಿಂತ ಬಿನ್ನವಾಗಿರುವ ಅಮೇರಿಕ ತುಂಬಾ ಅಪರಿಚಿತ ಅನ್ನಿಸುತ್ತಿತ್ತು. ಬೆಳಗಿನ ಸಮಯದಲ್ಲಿ (office hours) ಬಾಲ್ಕನಿಗೆ ಹೋಗಿ ನಿಂತರೂ ಎದುರಿನ ಪುಟ್ಟ ಮರದಲ್ಲಿ ಅಳಿಲು & 1-2 ಪಕ್ಷಿಗಳನ್ನು ಬಿಟ್ಟರೆ ಬೇರಾವ ಜೀವಿಯು ಕಾಣುತ್ತಿರಲ್ಲಿಲ್ಲ. ಮನುಷ್ಯರೇ ಕಾಣದಿದ್ದಾಗ ಇಡೀ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ನಲ್ಲಿ ನಾನೊಬ್ಬಳೇ(ನಿರುದ್ಯೋಗಿ) ಅನಿಸುತ್ತಿತ್ತು. ಆ ನೀರವ ಮೌನದಲ್ಲಿ ನೆನಪಾಗುವ ಅಪ್ಪ, ಅಮ್ಮ, ಮನೆ, ನೆಂಟರು, ಸ್ನೇಹಿತರು, ನನ್ನೂರು, ಮಳೆ, ಕನ್ನಡ, ಬೆಂಗಳೂರು, ಕಂಪನಿ….  2 ದಿನಕ್ಕೊಮ್ಮೆ ಮನೆಗೆ ಫೋನ್ ಮಾಡಿದರೂ ಮನಸ್ಸಿಗೆ ಸಮಾಧಾನವಾಗದೆ 1 ತಿಂಗಳಲ್ಲಿ ನಾ ನೋಡಿದ ಅಮೇರಿಕದ ಕುರಿತು 10 ಪುಟಗಳ ಪತ್ರ (ಪ್ರಬಂಧ?) ಬರೆದು ಮನೆಗೆ ಪೋಸ್ಟ್ ಮಾಡಿದ್ದೆ.

ಬೆಳಿಗ್ಗೆ 9:30 ರಿಂದ ಸಂಜೆ 6:30ರವರೆಗೆ laptopನೊಳಗೆ ಮುಳುಗಿರುತ್ತಿದ್ದೆ. ಒಮ್ಮೆ ಚಾಟಲ್ಲಿ ಸಿಕ್ಕಾಗ ಗೆಳತಿ ಸಿಂಧು ಕನ್ನಡ ಬ್ಲಾಗುಗಳು & ಕೆಂಡಸಂಪಿಗೆ ಬಗ್ಗೆ ತಿಳಿಸಿದ್ದಳು. ಸಿಂಧುಳ “ನೆನಪು-ನೇವರಿಕೆ“ಯೊಂದಿಗೆ ಬ್ಲಾಗ್ ಲೋಕಕ್ಕೆ ಕಾಲಿಟ್ಟಿದ್ದೆ. ನಂತರ ಅನೇಕ ಬ್ಲಾಗುಗಳು ಪರಿಚಯ ಆಯ್ತು. ಹೀಗೆ ಬ್ಲಾಗ್ ಓದುತ್ತಾ ಹೋದಾಗ ನಾನೂ ಯಾಕೆ ಬ್ಲಾಗ್ ಬರೆಯಬಾರದು ಅಂತ ಯೋಚನೆ ಬಂದಿತ್ತು. ಬ್ಲಾಗ್ ಓಪನ್ ಮಾಡಬಹುದು ಆದರೆ ಬರೆಯುವುದೇನನ್ನು?

ಚಿಕ್ಕಂದಿನಿಂದ ಅಕ್ಕ & ತಮ್ಮನಿಗೆ ಕತೆ-ಕವನ ಬರೆಯುವುದು & ಡ್ರಾಯಿಂಗ್ ಮಾಡುವ ಅಭ್ಯಾಸವಿದ್ದರೂ ನಾನು ಯಾವತ್ತೂ ಆ ರೀತಿ ಪ್ರಯತ್ನ ಮಾಡಿರಲಿಲ್ಲ. ಪುಸ್ತಕದ ಹುಳುವಾಗಿದ್ದ ನಾನು ಶಾಲಾ ಕಾಲೇಜು ನೋಟ್ಸ್ ಬಿಟ್ಟರೆ ಬೇರೆ ವಿಷಯಗಳನ್ನು ಬರೆದಿದ್ದು ಅಪರೂಪ.  ಈಗ 1 ವರ್ಷದ ನಂತರ ಬರೆಯಲೇಬೇಕೆಂದು “ರಮ್ಯ ಪ್ರಪಂಚ”ವನ್ನು ಪ್ರಾರಂಭಿಸಿದ್ದೇನೆ. ಕತೆ, ಕಲ್ಪನೆ, ಕನಸು, ಅನುಭವಗಳನ್ನು ಅಕ್ಷರಕ್ಕಿಳಿಸುವ ಒಂದು ಚಿಕ್ಕ ಪ್ರಯತ್ನ.


Responses

 1. ವೆಲ್ಕಮ್ ಟು ಬ್ಲಾಗ್ಗಿಂಗ್!

 2. ಥ್ಯಾಂಕ್ಸ್ ರಂಜಿತ್..

 3. ರಮ್ಯ ಸ್ವಾಗತ ನಿಮಗೆ ಈ ಬ್ಲಾಗ್ ಪ್ರಪಂಚಕ್ಕೆ
  ನೀವು ಬರೆಯಿರಿ ನಾವಿದ್ದೇವೆ ಓದುವುದಕ್ಕೆ

  ಆಸು ಹೆಗ್ಡೆ

  http://athradi.wordpress.com

 4. nice

 5. ಸುರೇಶ್ ಹೆಗ್ಡೆಯವರೇ,
  ಧನ್ಯವಾದಗಳು

 6. Akka tumba chennagiddu,All the best..

 7. ಸಹೋದರಿ, ನೀವು ಖಂಡಿತ ಚಂದ ಬರೆಯುತ್ತೀರಿ..ಮುಂದುವರೆಸಿ ನಿಮ್ಮ ಬರಹವನ್ನು..ನಿಮ್ಮದು ಮನೆ ಅಡುಗೆ: ಮಾಡಿ ಉಣಬಡಿಸಿ ನಮಗೆ…!

 8. ಸಹೋದರ ನಾಗುರವರೆ ಧನ್ಯವಾದಗಳು.

 9. thumba chenaghidhe

 10. ಮಂಜೆಗೌಡರೆ ಧನ್ಯವಾದಗಳು.

 11. Okey… Al d Best!!

 12. ಥ್ಯಾಂಕ್ಸ್ ಮಹೇಶ್..

 13. ಹಾಯ್ ರಮ್ಯ,

  ಒಳ್ಳೆ ಯೋಚನೆ ಮತ್ತು ಪ್ರಯತ್ನ. ನೋಡಿದ್ದನ್ನ ಪೂರ್ವಾಗ್ರಹವಿಲ್ಲದೆ ಬರೆಯುತ್ತ ಹೋಗು. ನಾನು ನಿನ್ನ ಓದುಗಳು.

  ಶುಭವಾಗಲಿ
  ಪ್ರೀತಿಯಿಂದ
  ಸಿಂಧು

  • ಥ್ಯಾಂಕ್ಸ್ ಸಿಂಧು..

 14. ಯಾಕೆ ಮತ್ತೆ ಬರೆದಿಲ್ಲ ರಮ್ಯ?

  • ಹೆಗ್ಡೆಯವರೆ,
   ಬರೀತಿದೀನಿ. ಧನ್ಯವಾದಗಳು.

 15. it is really nice


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: