Posted by: ರಮ್ಯ | ಜುಲೈ 31, 2009

ಅಮೇರಿಕ ನಾ ಕಂಡಂತೆ..ಭಾಗ ೧

ನಾನು ಅಮೇರಿಕಕ್ಕೆ ಬಂದನಂತರ 4 ತಿಂಗಳು ಟೆಕ್ಸಸ್ ರಾಜ್ಯದ ಪ್ಲೇನೋ ನಗರದಲ್ಲಿದ್ದೆ. ನಂತರ ಬಂದಿದ್ದು ಕ್ಯಾಲಿಫೋರ್ನೀಯ ರಾಜ್ಯದ ಫ್ರೆಮೌಂಟ್ ನಗರ. ಭಾರತದಲ್ಲಿರುವಂತೆ ಇಲ್ಲೂ ಸಹ ನಗರಗಳ, ರಾಜ್ಯಗಳ ನಡುವೆ ಕೆಲವು ವಿಷಯಗಳಲ್ಲಿ ವ್ಯತ್ಯಾಸಗಳಿವೆ. ಇಲ್ಲಿರುವುದು ಕೇವಲ ನಾನು ನೋಡಿದ್ದು ಮತ್ತು ಗಮನಿಸಿದ್ದು ಮಾತ್ರ.

 • ಶುಚಿತ್ವಕ್ಕೆ ಮೊದಲ ಪ್ರಾಶಸ್ತ್ಯ.
 • ಮನುಷ್ಯನಿಗಿಂತ ಯಂತ್ರ ಮುಖ್ಯ. ಹೆಚ್ಚಿನ ಕೆಲಸಗಳಲ್ಲಿ ಯಂತ್ರಗಳ ಬಳಕೆ.
ಯಂತ್ರದಿಂದ ಕಟ್ಟಿದ ಹುಲ್ಲು..

ಯಂತ್ರದಿಂದ ಕಟ್ಟಿದ ಹುಲ್ಲು..

 • ಪೆಟ್ರೋಲ್ ಬಂಕ್ ಗಳಲ್ಲಿ ಸ್ವಸಹಾಯ ಪದ್ದತಿ. ನಗದು ಅಥವಾ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿ ವಾಹನಗಳಿಗೆ ನಾವೇ ಪೆಟ್ರೋಲ್ ತುಂಬಿಸಿಕೊಳ್ಳಬೇಕು.
ಪೆಟ್ರೋಲ್ ಬಂಕ್..

ಪೆಟ್ರೋಲ್ ಬಂಕ್..

 • ಹಣ ಪಾವತಿಸಿ, ನಿಲುಗಡೆ ಮಾಡಿ.
ಹಣ ಪಾವತಿಸಿ, ವಾಹನ ನಿಲ್ಲಿಸಿ..

ಹಣ ಪಾವತಿಸಿ, ವಾಹನ ನಿಲ್ಲಿಸಿ..

 • ಪತ್ರಿಕೆಗಳನ್ನು ಯಂತ್ರಗಳಲ್ಲಿ ಕೆಲವು ಜನನಿಬಿಡ ಪ್ರದೇಶಗಳಲ್ಲಿ ಇಟ್ಟಿರುತ್ತಾರೆ. ಹಣ ಹಾಕಿ ಪಡೆಯಬಹುದು.
ಹಣ ಹಾಕಿ , ಪತ್ರಿಕೆ ಪಡೆಯಿರಿ..

ಹಣ ಹಾಕಿ , ಪತ್ರಿಕೆ ಪಡೆಯಿರಿ..

 • ಅಪಾರ್ಟ್‌ಮೆಂಟ್, ಮನೆ ಹಾಗೂ ಕಂಪನಿಗಳಲ್ಲಿ ಸೆಕ್ಯೂರೀಟಿ ಗಾರ್ಡ್ ಗಳು ಇರುವುದಿಲ್ಲ.
 • “ಕಾರ್ ರೆಂಟಲ್” ಒಂದು ದೊಡ್ಡ ಉಧ್ಯಮ. ಎಲ್ಲ ರೀತಿಯ ಕಾರುಗಳು ಬಾಡಿಗೆಗೆ, ಭೋಗ್ಯಕ್ಕೆ ಲಭ್ಯ. ಅದಕ್ಕೆ ನಾವೇ ಚಾಲಕರು.
 • ಕಾಲಿಗಿಂತ ಕಾರು ಮುಖ್ಯ. ಕಾರಿಲ್ಲದ ಜೀವನ ತುಂಬಾ ಕಷ್ಟ.
ಕಾರ್ ಕಾರ್ ಕಾರ್ ಎಲ್ನೋಡಿ ಕಾರ್..

ಕಾರ್ ಕಾರ್ ಕಾರ್ ಎಲ್ನೋಡಿ ಕಾರ್..

ಕಾರ್ ಮೇಲ್ ಕಾರು!!

ಕಾರ್ ಮೇಲ್ ಕಾರು!!

 • ಕಾರ್ ಇದ್ರೆ ಮಾತ್ರ ಕಾಲು. ಕಾರು ಇಲ್ಲದಿದ್ರೆ ಕಾಲೂ ವೇಸ್ಟ್.
 • ಸಾರ್ವಜನಿಕ ದೂರವಾಣಿ ಮತ್ತು ಬ್ರೌಸಿಂಗ್ ಸೆಂಟರ್ ತುಂಬಾ ಕಡಿಮೆ.
 • ಕಸದ ಬುಟ್ಟಿಗಳಿಗೆ ಕೊರತೆ ಇಲ್ಲ. ಅಂಗಡಿಗಳ ಮುಂದೆ, ಬಸ್ ನಿಲ್ದಾಣಗಳಲ್ಲಿ, ಉದ್ಯಾನವನಗಳಲ್ಲಿ, ಕೆಲವು ಟ್ರ್ಯಾಫಿಕ್ ಸಿಗ್ನಲ್‍ಗಳಲ್ಲಿ ಡಸ್ಟ್ ಬಿನ್ ಗಳನ್ನು ಕಾಣಬಹುದು.
 • ಅಂಗವಿಕಲರಿಗಾಗಿ ಎಲ್ಲ ಕಡೆ ವಿಶೇಷ ಸೌಲಭ್ಯ.
ಅಂಗವಿಕಲರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ

ಅಂಗವಿಕಲರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ

 • ಅಲ್ಲಲ್ಲಿ ಹಸಿರು ಮೈದಾನಗಳು, ಎಲ್ಲ ಕ್ರೀಡೆಗಳಿಗೆ ಅಗತ್ಯ ಸೌಲಭ್ಯಗಳು.
 • ಪ್ರಾಣಿಗಳನ್ನು ಸಾಕಲು ಪರವಾನಗಿ ಪಡೆಯಬೇಕು.
 • ನಾಯಿಗಳಿಗಾಗಿ ವಿಶೇಷ ಪಾರ್ಕ್. ತಮ್ಮ ಮಾಲೀಕರೊಂದಿಗೆ ಕಾರಿನಲ್ಲಿ ಕುಳಿತು ಡಾಗ್ ಪಾರ್ಕ್ ಗೆ ಆಗಮಿಸುವ ವಿವಿಧ ಜಾತಿಯ, ಬಣ್ಣದ ಶ್ವಾನಗಳು.
ಡಾಗ್ ಪಾರ್ಕ್, ಪ್ಲೇನೋ, ಟೆಕ್ಸಾಸ್

ಡಾಗ್ ಪಾರ್ಕ್, ಪ್ಲೇನೋ, ಟೆಕ್ಸಾಸ್

 • ಭಾರತೀಯರು ಜಾಸ್ತಿ ಇರುವ ಕಡೆಗಳಲ್ಲಿ ಹಿಂದೂ ದೇವಾಲಯಗಳನ್ನು ಕಾಣಬಹುದು. ಶಿವ, ಗಣೇಶ, ಲಕ್ಷ್ಮಿನಾರಾಯಣ, ಆಂಜನೇಯ, ನವಗ್ರಹಗಳು ಹೀಗೆ ಅನೇಕ ವಿಗ್ರಹಗಳನ್ನು ಒಂದೇ ಕಡೆ ಕಾಣಬಹುದು.
ಶಿವ-ವಿಷ್ಣು ದೇವಾಲಯ, ಲಿವರ್ ಮೋರ್, ಕ್ಯಾಲಿಫೋರ್ನಿಯಾ

ಶಿವ-ವಿಷ್ಣು ದೇವಾಲಯ, ಲಿವರ್ ಮೋರ್, ಕ್ಯಾಲಿಫೋರ್ನಿಯಾ

(ಮುಂದುವರಿಯುತ್ತದೆ…………………..)


Responses

 1. bengalurina traffic badukige oggikondu hosathenu kanalagada ee paristithiyalli America beledu ninthiruvudu nijakku acchari !!! mattashtu bareyiri…

  • ಲಕ್ಷ್ಮಿ ಕಾಂತ್,
   ಧನ್ಯವಾದಗಳು.
   ಅಮೇರಿಕ ವಿಸ್ತೀರ್ಣದಲ್ಲಿ ಭಾರತಕ್ಕಿಂತ ೩ ಪಟ್ಟು ದೊಡ್ಡದು. ಜನಸಂಖ್ಯೆ ಕೂಡ ಕಡಿಮೆ. ಕಾನೂನು ತುಂಬಾ ಕಟ್ಟುನಿಟ್ಟು. ಇದೆಲ್ಲಾ ಇದು ಬೆಳೆಯಲು ಕಾರಣವಾಗಿದೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: