Posted by: ರಮ್ಯ | ಜುಲೈ 6, 2010

ಅಮೇರಿಕ ನಾ ಕಂಡಂತೆ..ಭಾಗ ೩

ಮನೆಗಳು:

 • ಸುಮಾರು 200 ರಿಂದ 400 ಮನೆಗಳಿರುವ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಗಳನ್ನು ಕಾಣಬಹುದು. 2-3 ಮಹಡಿ ಅಪಾರ್ಟ್‌ಮೆಂಟ್‍ಗಳು.
 • ರಚನೆ ಹಾಗೂ ಬಣ್ಣದಲ್ಲಿ ಒಂದೇ ರೀತಿಯಾಗಿರುವ ಮನೆಗಳು. ಮನೆಗಳ ನೆಲ, ಗೋಡೆ, ಛಾವಣಿ ಎಲ್ಲ ಕಡೆ ಮರದ ಹಲಗೆಗಳನ್ನು ಬಳಸುತ್ತಾರೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡ

ನಿರ್ಮಾಣ ಹಂತದಲ್ಲಿರುವ ಕಟ್ಟಡ

 • ಹಲವು ಅಪಾರ್ಟ್‌ಮೆಂಟ್‍ಗಳಲ್ಲಿ ಕಾಲಿಂಗ್ ಬೆಲ್ ಇಲ್ಲ.
 • ಎಲೆಕ್ಟ್ರಿಕ್ ಅಥವಾ ಗ್ಯಾಸ್ ಸ್ಟೋವ್ ಮತ್ತು ಮೈಕ್ರೋ ಓವೆನ್.
 • ವಾಷಿಂಗ್ ಮಶೀನ್ ಮತ್ತು ಡ್ರೈಯರ್.
 • ಏರ್ ಕಂಡೀಶನ್(AC) ಅಥವಾ ಹೀಟರ್ (ಆಯಾ ಪ್ರದೇಶದ ವಾತಾವರಣಕ್ಕೆ ಅನುಸಾರವಾಗಿ).
 • 24 ಗಂಟೆ ಕರೆಂಟ್ ಮತ್ತು ನೀರು. (ಒಂದು ವೇಳೆ ಕರೆಂಟ್ ಅಥವಾ ನೀರು ನಿಲ್ಲಿಸುವುದಾದರೆ 2 ದಿನ ಮೊದಲೇ ಲೆಟರ್ ಮೂಲಕ ತಿಳಿಸುತ್ತಾರೆ)
 • ಪಾತ್ರೆ ತೊಳಿಯಲು ಡಿಶ್ ವಾಶರ್.
 • ಇಡೀ ಮನೆಗೆ ಕಾರ್ಪೇಟ್.
 • ಅಲ್ಲಲ್ಲಿ ಡೈರೆಕ್ಟ್ ಪ್ಲಗ್ ಪಾಯಿಂಟ್ ಗಳು.
ಡೈರೆಕ್ಟ್ ಪ್ಲಗ್ ಪಾಯಿಂಟ್

ಡೈರೆಕ್ಟ್ ಪ್ಲಗ್ ಪಾಯಿಂಟ್

 • ಫ್ಯಾನಿ ನೊಂದಿಗೆ ವಿದ್ಯುತ್ ದೀಪಗಳು. ಎರಡರಿಂದ ಒಂದೇ ಸ್ವಿಚ್.
ಫ್ಯಾನ್ + ಲೈಟ್

ಫ್ಯಾನ್ + ಲೈಟ್

 • ಸ್ಮೋಕ್ ಡಿಟೆಕ್ಟರ್.
 • ರೆಫ್ರಿಜರೇಟರ್.

ಜನಜೀವನ:

 • ಯಾರೂ ಬೇರೆಯವರ ಮೇಲೆ ಅವಲಂಬಿತವಾಗಿರುವುದಿಲ್ಲ.
 • ಎಲ್ಲ ಕೆಲಸಗಳಲ್ಲಿ ಎಲ್ಲ ವಯಸ್ಸಿನವರನ್ನು ಕಾಣಬಹುದು.
 • ವಿದ್ಯಾರ್ಥಿಗಳು ಅಂಗಡಿ, ಹೋಟೆಲ್ ಹಾಗೂ ಇತರ ಕಡೆಗಳಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾರೆ.
 • ಯಾವ ಕೆಲಸವೂ ಕೀಳಲ್ಲ. ಯಾರೂ ದೊಡ್ಡವರಲ್ಲ. ಎಲ್ಲರಿಗೂ ಒಂದೇ ಕಾನೂನು.
 • ಗಂಡು, ಹೆಣ್ಣು ಸಮಾನರು.
 • ಕಾರು, ಬಸ್ ಚಾಲನೆ, ಅಂಚೆ ವಿತರಣೆ, ಪೋಲೀಸ್ ಹೀಗೆ ಎಲ್ಲ ಕೆಲಸಗಳಲ್ಲೂ ಮಹಿಳೆಯರನ್ನು ಕಾಣಬಹುದು.
 • ಬೇರೆಯವರ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ. ಅವರಾಯಿತು ಅವರ ಕೆಲಸವಾಯಿತು.

ಅಂಗಡಿಗಳು:

 • ಮೆಟ್ರೋ ಹಾಗೂ ಬಿಗ್ ಬಜಾರ್ ಗಳಿಗೆ ಹೋಲಿಸಬಹುದಾದ ಅಂಗಡಿಗಳು.
 • ಸಾಮಾನ್ಯವಾಗಿ ಒಂದೇ ಮಹಡಿಯಲ್ಲಿರುತ್ತವೆ.(ನೆಲ ಅಂತಸ್ತಿನಲ್ಲಿ)
 • ಭಾರತೀಯ ಅಂಗಡಿಗಳಲ್ಲಿ ಭಾರತದಲ್ಲಿ ಸಿಗುವ ಎಲ್ಲ ವಸ್ತುಗಳು, ಹಣ್ಣು-ತರಕಾರಿಗಳು ಲಭ್ಯ.
 • ಕ್ಯಾನ್ ಮತ್ತು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಲು, ಮೊಸರು.

ಮಕ್ಕಳು:

 • ಚಿಕ್ಕಂದಿನಿಂದಲೇ ಮಕ್ಕಳನ್ನು ಸ್ವತಂತ್ರವಾಗಿ ಬದುಕಲು ಕಲಿಸುತ್ತಾರೆ.
 • ವಿವಿಧ ಕ್ರೀಡೆಗಳು, ಈಜು, ಸ್ಕೇಟಿಂಗ್ ಹೀಗೆ ಎಲ್ಲ ಕಲಿಸುತ್ತಾರೆ.
 • ಚಿಕ್ಕಮಕ್ಕಳು(1-2 ತಿಂಗಳಿನ ಮಕ್ಕಳು) ಅತ್ತರೂ 2 ದಿನ ಅತ್ತು 3ನೇ ದಿನ ಸುಮ್ಮನಾಗುತ್ತಾರೆಂಬ ದೋರಣೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: