Posted by: ರಮ್ಯ | ಅಕ್ಟೋಬರ್ 15, 2010

ನಾನೂ ಡೆಲ್ಲಿಗೆ ಹೋಗಿದ್ದೆ….

ದೆಹಲಿ ಎಂದಾಕ್ಷಣ ನನಗೆ ನೆನಪಾಗುವುದು ಕ್ಯಾಂಪ್, ಆಲೂಗಡ್ಡೆ ಸಾಂಬಾರ್, ಕೊಳಚೆ ಪ್ರದೇಶಗಳು. ಅದಕ್ಕೆ ಕಾರಣ ಚಿಕ್ಕಂದಿನಲ್ಲಿ ನಾ ನೋಡಿದ ಡೆಲ್ಲಿ.
ನಾನು ೪ನೆಯ ಕ್ಲಾಸಿನಲ್ಲಿದ್ದಾಗ “guides” ಗೆ ಸೇರಿದ್ದೆ. ದೆಹಲಿಯಲ್ಲಿ ೮ ದಿನಗಳ ಕಾಲ ನಡೆಯುವ ರಾಷ್ಟಮಟ್ಟದ ರ್ಯಾಲಿಗೆ ಶಿವಮೊಗ್ಗ ಜಿಲ್ಲೆಯಿಂದ ನಮ್ಮ ಸ್ಕೂಲಿನ guides ಸೆಲೆಕ್ಟ್ ಆಗಿದ್ವಿ. ಟೀಚರ್ ಜೊತೆ ೯ ಜನರಲ್ಲಿ ೪ ಜನ ಹೊರಟೆವು. ಆ ಸಮಯದಲ್ಲಿ ದೆಹಲಿಯಲ್ಲಿ ಬಾಬರಿ ಮಸೀದಿ ವಿಷಯಕ್ಕಾಗಿ ಗಲಾಟೆ ನಡೆಯುತಿತ್ತು. ದೆಹಲಿಯಲ್ಲಿ ಬಂದ್ ನಡೀತಾ ಇದೆ ಅಂತ ಕೆಲವರು & ಅರ್ಥಿಕ ತೊಂದರೆಯಿಂದ ಕೆಲವರು ಬರಲಿಲ್ಲ.

ಸಾಗರದಿಂದ ಬೆಂಗಳೂರಿಗೆ ಬಸ್ ಹತ್ತಿದೆವು. ದೆಹಲಿಗೆ ಹೋಗೋ ಉತ್ಸಾಹದಲ್ಲಿ ನಮಗಿಂತ ದೊಡ್ಡ ಬ್ಯಾಗ್ ಹೊತ್ತು ಬೆಂಗಳೂರು ತಲುಪಿದ್ವಿ. ಬೆಂಗಳೂರನ್ನು “ಸ್ವಲ್ಪ” ನೋಡಿ ದೆಹಲಿಗೆ ರೈಲು ಹತ್ತಿದೆವು. ರೈಲಿನಲ್ಲಿ ನಮಗೆ ಶಿವಮೊಗ್ಗದ ಹೈಸ್ಕೂಲ್ “ಸ್ಕೌಟ್ಸ್”ಗಳ ಪರಿಚಯವಾಯ್ತು. ನಮ್ಮ ಬ್ಯಾಗ್ ಗಳನ್ನು ಅವರಿಗೆ ಹೊರಿಸಿದ್ದಾಯ್ತು. ನನಗೆ ತಿಳುವಳಿಕೆ ಬಂದ ನಂತರ ಮೊದಲ ಬಾರಿಗೆ ರೈಲು ಹತ್ತಿದ್ದೆ. ೨ ದಿನ ರಾತ್ರಿ ಸಹ ನಿದ್ರೆ ಮಾಡದೇ ಹೊರಗಡೆ ನೋಡ್ತಾ ಕುಳಿತಿದ್ದೆ. ದೂರದಲ್ಲಿ ಲೈಟ್ ಬೆಳಕಿನಲ್ಲಿ ಕಂಗೊಳಿಸುವ ನಗರಗಳನ್ನು ನೋಡಿ ಸಂತೋಷಪಟ್ಟೆ.

ದೆಹಲಿ ತಲುಪಿದಾಗ ತುಂಬ ಸುಸ್ತಾಗಿತ್ತು. ನಮ್ಮ ಕ್ಯಾಂಪ್ ಸಿಟಿಯಿಂದ ಹೊರಗಡೆ ಇತ್ತು. ಅಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಅನೇಕ ವಿಧ್ಯಾರ್ಥಿಗಳಿದ್ದರು. ಬೆಂಗಳೂರಿನಿಂದ ಒಂದು ಹೈಸ್ಕೂಲ್ ನ guides ಬಂದಿದ್ದರು. ಆ ಕ್ಯಾಂಪ್ ನಲ್ಲಿ ನಾವೇ ಎಲ್ಲರಿಗಿಂತ ಕಿರಿಯವರು. ಮನೆಯಲ್ಲಿ ೮ ಗಂಟೆಗೆ ಏಳುತ್ತಿದ್ದ ನನಗೆ ಆ ಚಳಿಯಲ್ಲಿ ೫ ಗಂಟೆಗೆ ಏಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಕ್ಯಾಂಪಿನಲ್ಲಿ ಇದ್ದ ೮ ದಿನವೂ ಅನ್ನದೊಂದಿಗೆ ಆಲೂಗಡ್ಡೆ ಸಾಂಬಾರ್ ಹಾಜರ್ ಇರುತ್ತಿತ್ತು. ಒಂದೆರಡು ದಿನ ಸಾಯಂಕಾಲ ಕ್ಯಾಂಪಿನ ಹತ್ತಿರ ಇರುವ ಕೆಲವು ಗಲ್ಲಿಗಳಲ್ಲಿ ಓಡಾಡಿದೆವು. ಹಿಂದೂ-ಮುಸ್ಲಿಂ ಗಲಾಟೆಗೆ ಹೆದರಿ ನಾವು ಸಿಟಿ ನೋಡಲು ಹೋಗಲಿಲ್ಲ.

ಮನೆಗೆ ಹೊರಟಾಗ ಟೀಚರ್ ಕ್ಯಾಂಪಿನ ಮೇಲ್ವಿಚಾರಕರಿಗೆ ನಾವು ಪಡೆದ ವಸ್ತುಗಳನ್ನು ಹಿಂದಿರುಗಿಸಲು ಹೋಗಿದ್ದರು. ನಾವು ೪ ಜನ ಟೀಚರ್ ಗಾಗಿ ಕಾಯುತ್ತ ನಿಂತಿದ್ದಾಗ ಅಲ್ಲಿಗೆ ಒಬ್ಬರು ಸ್ಕೌಟ್ ಮಾಸ್ಟರ್ ಬಂದರು. ಅವರು “ಓಗಲ್” ತಿರುಗ ಮುರುಗ ಹಾಕಿಕೊಂಡಿದ್ದರು. ಅದನ್ನು ನೋಡಿದ ನಮಗೆ ಏನು ಹೇಳಬೇಕೆಂದು ತೋಚಲಿಲ್ಲ. ಎಲ್ಲರು ಮುಖ ಮುಖ ನೋಡಿಕೊಳ್ಳುವುದರ ವಿನಃ ಬೇರೆ ದಾರಿ ಕಾಣಲಿಲ್ಲ. ಹಿಂದಿಯಂತು ಬರುತ್ತಿರಲಿಲ್ಲ. ಆಗ ನಾನು ಟೀವಿ ನೋಡಿದ ಅಲ್ಪ ಸ್ವಲ್ಪ ಜ್ಞಾನದಿಂದ ಅವರನ್ನು ಕುರಿತು “ಓಗಲ್ ಉಲ್ಟಾ ಹೋಗಯಾ” ಅಂದೆ. ಅವರು ತಮ್ಮ ಓಗಲ್ ನೋಡಿ ಸರಿಪಡಿಸಿಕೊಂಡು ಅಲ್ಲಿಂದ ಮಾಯವಾದರು.

ಎಂಟು ದಿನ ಕ್ಯಾಂಪ್ ನಲ್ಲಿದ್ದು ಸುಸ್ತಾಗಿದ್ದ ನಮಗೆ ಮನೆ ತಲುಪಿದರೆ ಸಾಕಾಗಿತ್ತು. ಸಾಗರಕ್ಕೆ ಬಂದಾಗ ಊಟದ ಸಮಯವಾಗಿತ್ತು. ಟೀಚರ್ ಮನೆಗೆ ಹೋದಾಗ ಆಲೂಗಡ್ಡೆ ಸಾಂಬಾರ್ ನಮಗಾಗಿ ಕಾದಿತ್ತು. ಮದ್ಯಾಹ್ನ ಊರಿಗೆ ಹೊರಟಾಗ ಪರಿಚಯದವರೆಲ್ಲ ನನ್ನ ಬ್ಯಾಗ್ ನೋಡಿ “ಎಲ್ಲಿಗೆ ಹೊರಟಿದ್ದೀಯ?” ಎಂದು ಕೇಳಿದರು. “ನಾನು ಡೆಲ್ಲಿಗೆ ಹೋಗಿದ್ದೆ” ಎಂದಾಗ ಯಾರಿಗೂ ನಂಬಿಕೆ ಬರಲಿಲ್ಲ. “ಟೀಚರ್ ಜೊತೆ ಕ್ಯಾಂಪ್ ಗೆ ಹೋಗಿದ್ದೆ” ಎಂದಾಗ ನಂಬಿದರು. ಮನೆಗೆ ಹೋದಾಗ ಎಲ್ಲರು “ದೆಹಲಿಯಲ್ಲಿ ಏನು ನೋಡಿದೆ” ಎಂದು ಕೇಳಿದರು. ನಾನು ಏನು ತಾನೆ ಹೇಳಲಿ? ಕ್ಯಾಂಪ್ ನ ಹತ್ತಿರ ಇರೋ ಒಂದೆರೆಡು ಕೊಳಚೆ ಪ್ರದೇಶಗಳ ಹೊರತಾಗಿ ಏನನ್ನೂ ನೋಡಿರಲಿಲ್ಲ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: