Posted by: ರಮ್ಯ | ನವೆಂಬರ್ 5, 2010

ಚೀನಿಕಾಯಿ ಹಬ್ಬ!!

ಮಲೆನಾಡಿನಲ್ಲಿ ದೀಪಾವಳಿ ಹಬ್ಬಕ್ಕೆ ಚೀನಿಕಾಯಿ ಕಡುಬು ಮಾಡುವುದು ಸಂಪ್ರದಾಯ. ಆದರೆ ಇಲ್ಲಿ ಚೀನೀಕಾಯಿಗಾಗಿಯೇ ಹಬ್ಬ ನಡೆಯುತ್ತದೆ. ಆ ದಿನ “ಸರ್ವಂ ಚೀನಿಕಾಯಿ ಮಯಂ”.
ಕಳೆದ ತಿಂಗಳು ಕ್ಯಾಲಿಫೋರ್ನಿಯಾದ “ಹಾಫ್ ಮೂನ್ ಬೇ” (Half Moon Bay) ನಲ್ಲಿ ಚೀನೀಕಾಯಿ ಮೇಳ (World’s Pumpkin Festival) ನಡೆಯಿತು. ಆಮೆಗತಿಯಲ್ಲಿ ಸಾಗಿದ ಟ್ರಾಫಿಕ್ ನಿಂದಾಗಿ ಸಾಮಾನ್ಯವಾಗಿ ೧೦ ನಿಮಿಷದಲ್ಲಿ ಪ್ರಯಾಣಿಸುವ ೮ ಮೈಲು ಹೋಗಲು ೨ ಗಂಟೆ ಹಿಡಿಯಿತು. ನಾವು ಅಲ್ಲಿಗೆ ಹೋದಾಗ “ಪಂಪ್ಕಿನ್ ಪರೇಡ್” ಮುಗಿದಿತ್ತು. ಪ್ರತಿವರ್ಷ ಅಕ್ಟೋಬರ್ ನಲ್ಲಿ ನಡೆಯುವ ಈ ಮೇಳಕ್ಕೆ ಸುಮಾರು ೩ ಲಕ್ಷ ಜನ ಸೇರಿದ್ದರು.
ಈ ಮೇಳಕ್ಕೆ ಮೊದಲು ದೈತ್ಯ ಚೀನಿಕಾಯಿಗಳ ಸ್ವರ್ಧೆ(World Championship Pumpkin Weigh-Off) ನಡೆಯುತ್ತದೆ. ಇದರಲ್ಲಿ ಮೊದಲ ೫ ಸ್ಥಾನ ಗಳಿಸಿದ ಚೀನಿಕಾಯಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ೨ ದಿನಗಳ ಕಾಲ ವಿವಿಧ ಸ್ಪರ್ಧೆಗಳು, ಚೀನಿಕಾಯಿಯಿಂದ ಮಾಡಿದ ಆಕೃತಿಗಳು, ತಿಂಡಿತಿನಿಸುಗಳು, ಆಟಿಕೆಗಳು, ವಿವಿಧ ಆಕಾರ & ಗಾತ್ರದ ಚೀನಿಕಾಯಿಗಳ ಪ್ರದರ್ಶನ & ಮಾರಾಟ ನಡೆಯಿತು.

ಚೀನಿಕಾಯಿ ಬೇಕಾ ಚೀನಿಕಾಯಿ.....

ಚೀನಿಕಾಯಿಯಲ್ಲಿ ವಿವಿಧ ಆಕೃತಿಗಳು

"ಪಂಪ್ಕಿನ್ ಚಾಂಪಿಯನ್ ೨೦೧೦" (696 kg, ಬಹುಮಾನದ ಮೊತ್ತ ಸುಮಾರು 4 ಲಕ್ಷ ರೂ.)

ಡ್ರಂ ಬಾರಿಸುತ್ತಿರುವ ೩ ವರ್ಷದ ಬಾಲಕ..

ಫೋಟೋ ಗ್ಯಾಲರಿ:

Half Moon Bay Art & Pumpkin Festival
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: