Posted by: ರಮ್ಯ | ಡಿಸೆಂಬರ್ 19, 2010

ಡಿಸೆಂಬರ್ ನ ಒಂದು ದಿನ……

೨ ವರ್ಷದ ಹಿಂದಿನ ಘಟನೆ. ಬೆಳಿಗ್ಗೆ ೧೧:೦೦ ಗಂಟೆ ಸಮಯ. ಮನೆಗೆಲಸದಲ್ಲಿ ತೊಡಗಿದ್ದಾಗ ಯಾರೋ ಬಾಗಿಲು ಬಡಿದ ಸದ್ದಾಯ್ತು. ಯಾರಿರಬಹುದು ಎಂದು ಬಾಗಿಲ ಬಳಿ ಹೋಗುವಸ್ಟರಲ್ಲಿ ಬಾಗಿಲು ಬಡಿದವರು ಲಾಕ್ ತೆಗೆದುಕೊಂಡು ಒಳಬಂದಾಗಿತ್ತು.

9-1-1…..೭-೮ ಜನ ಪೊಲೀಸರು ಸಶಸ್ತ್ರ ಸಜ್ಜಿತರಾಗಿ ನಮ್ಮನೆ ಬಾಗಿಲಲ್ಲಿ ನಿಂತಿದ್ದರು. “Go down immediately. It’s an emergency” ಎಂದಾಗ ಮರುಮಾತಾಡದೆ ಅವರೊಂದಿಗೆ ಹೊರಟೆವು. ಆ ೮ ಜನ ನಮ್ಮಿಬ್ಬರನ್ನು ಸುತ್ತುವರೆದು ೨ನೇ ಮಹಡಿಯಿಂದ ಕರೆದುಕೊಂಡು ಹೊರಟಾಗ ಮನದಲ್ಲಿ ನೂರಾರು ಯೋಚನೆಗಳು. ೧ ವಾರದ ಮೊದಲು ಮುಂಬೈನ ತಾಜ್ ಹೋಟೆಲ್ ನಲ್ಲಿ ಉಗ್ರರು ದಾಳಿ ನಡೆಸಿದ ಘಟನೆ ಮನದಲ್ಲಿನ್ನೂ ಹಸಿಯಾಗಿತ್ತು. ಉಗ್ರರು ಇಲ್ಲಿ ದಾಳಿ ಮಾಡಿರಬಹುದಾ????

ಕೆಳಗಡೆ ಹೋಗಿ ನೋಡಿದರೆ ಸುಮಾರು ೨೫-೩೦ ಪೊಲೀಸರು, ೮-೧೦ ಪೋಲಿಸ್ ಕಾರುಗಳು, ೨ ಅಗ್ನಿಶಾಮಕ ವಾಹನಗಳು(fire engine) ಮತ್ತು ಮಾಧ್ಯಮ ಪ್ರತಿನಿಧಿಗಳು.

ನಡೆದದ್ದಿಷ್ಟು. ೧ನೇ ಮಹಡಿಯಲ್ಲಿರುವ ವ್ಯಕ್ತಿ ತನ್ನ ವಯಕ್ತಿಕ ಕಾರಣಗಳಿಂದಾಗಿ ತನ್ನ ಮನೆಯಲ್ಲಿ ಶೂಟ್ ಮಾಡಿದ್ದ. ಮನೆಯಲ್ಲಿ ಯಾರೂ ಇರಲಿಲ್ಲ. ಅವನು ಹಾರಿಸಿದ ಗುಂಡು ಪಕ್ಕದ ಮನೆಯೊಳಗೆ ನುಗ್ಗಿತ್ತು. (ಇಲ್ಲಿ ಮನೆಗಳನ್ನು ಮರದ ಹಲಗೆ ಯಿಂದ ಕಟ್ಟಿರುತ್ತಾರೆ.) ಅವರು 911 ಗೆ ಕಾಲ್ ಮಾಡಿದ್ದಾರೆ. ೨೫-೩೦ ಪೊಲೀಸರು ಅಪಾರ್ಟ್ಮೆಂಟ್ ಸುತ್ತುವರೆದಿದ್ದಾರೆ. ಆ ವ್ಯಕ್ತಿಗೆ ಶರಣಾಗಲು ಸೂಚನೆ ಕೊಟ್ಟಿದ್ದಾರೆ. ಸುಮಾರು ೧ ಗಂಟೆಯಾದರೂ ಅವನು ಮನೆಯಿಂದ ಹೊರಬರದೆ ಇದ್ದಾಗ ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತ ೧೦ ಮನೆಗಳನ್ನು ಖಾಲಿ ಮಾಡಿಸಿದ್ದಾರೆ. ಎದುರುಗಡೆ ಮೈನ್ ರೋಡ್ ಬ್ಲಾಕ್ ಮಾಡಿಸಿದ್ದಾರೆ.

ಆಗಲೇ ೩ ಗಂಟೆ ಆಗಿತ್ತು. ಕೆಳಗಡೆ ಹೋಗಿ ಕುಳಿತ ನಮಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಇಲ್ಲಿ ನೋಡಿದರೆ ಸದ್ಯ ನಮ್ಮನ್ನು ಮನೆಗೆ ಬಿಡುವ ಸೂಚನೆ ಕಾಣಿಸಲಿಲ್ಲ. ಸರಿ, ಎಲ್ಲಾದರೂ ಊಟಕ್ಕೆ ಹೋಗೋಣ ಎಂದರೆ ಕಾರ್ ಪಾರ್ಕಿಂಗ್ ಬಳಿ ಪೋಲೀಸರ ಸರ್ಪಗಾವಲು.

ಬೇರೆ ದಾರಿ ಇಲ್ಲದೆ ಮನೆಗೆ ಸಮೀಪದಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ಗೆ ಹೋದೆವು. ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿದ್ದ ಹೋಟೆಲ್ನಲ್ಲಿ ೨-೩ ದಿನದ ಹಿಂದೆ ಮಾಡಿದಂತಿದ್ದ ಅಡುಗೆ ನಮಗಾಗಿ ಕಾದಿತ್ತು. ಹೋದ ತಪ್ಪಿಗೆ ಊಟ ಮಾಡಿದ ಶಾಸ್ತ್ರ ಮಾಡಿ ಬರುವಷ್ಟರಲ್ಲಿ ಮನೆಯೊಳಗೆ ಹೋಗಬಹುದೆಂದು ಸೂಚನೆ ಸಿಕ್ಕಿತ್ತು.

ಸುಮಾರು ೨-೩ ತಿಂಗಳ ನಂತರ ಅಪಾರ್ಟ್ಮೆಂಟ್ ನಲ್ಲಿರುವ ಗೆಳತಿಯೊಬ್ಬಳ ಬಳಿ ಮಾತನಾಡಿದಾಗ ‘ಘಟನೆಯ ೧೫ ದಿನಗಳ ಬಳಿಕ ನಮ್ಮ ಕೆಳಗಡೆ ಮನೆಯ ಆ ವ್ಯಕ್ತಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಯಿತು’.

ಕಳೆದ ತಿಂಗಳು ಪರಿಚಯದ ಮಹಿಳೆಯೊಬ್ಬರು ‘ಅಮೇರಿಕಾದಲ್ಲಿ ಸುರಕ್ಷತೆಯ ವಿಚಾರ’ ಮಾತನಾಡುತ್ತ ತಮ್ಮ ಅನುಭವವನ್ನು ಹೇಳಿಕೊಂಡರು. ಭಾರತದಿಂದ ಬಂದ ಮಾರನೆಯ ದಿನ ಅವರು ಬೆಳಗ್ಗೆ ೭:೦೦ಕ್ಕೆ ಭಾರತಕ್ಕೆ ಫೋನ್ ಮಾಡಿದರಂತೆ. ಕಂಟ್ರಿ ಕೋಡ್ ೯೧ ಬದಲು ೯೧೧ ಹೊಡೆದು ನಂಬರ್ ಡಯಲ್ ಮಾಡಿದ್ದಾರೆ. (೯೧೧ ಅಮೇರಿಕಾದಲ್ಲಿ ಎಮರ್ಜೆನ್ಸಿ ನಂಬರ್) ನಂಬರ್ ತಪ್ಪು ಹೊಡೆದದ್ದು ಅರಿವಾಗಿ ತಕ್ಷಣ ಕಾಲ್ ಕಟ್ ಮಾಡಿದ್ದಾರೆ. ೫ ನಿಮಿಷದಲ್ಲಿ ಪೊಲೀಸರು ಮನೆಗೆ ಬಂದಿದ್ದಾರೆ. ಏನೆಂದು ವಿಚಾರಿಸಿದಾಗ  ಇವರಿಗೆ ತಾವು ಎಮರ್ಜೆನ್ಸಿ ನಂಬರ್ ಡಯಲ್ ಮಾಡಿದ್ದರ ಅರಿವಾಗಿದ್ದು. ಕೊನೆಗೆ ಅವರಿಗೆ ಸಾರಿ ಹೇಳಿ ಕಳುಹಿಸಿದರಂತೆ.

೨೬/೧೧ ರ ಆರೋಪಿ ಕಸಬ್ ನನ್ನು ನಮ್ಮ ಸರ್ಕಾರ ಇನ್ನೂ ‘ಅತಿಥಿ ದೇವೋಭವ’ ಎಂದು ರಾಜಮರ್ಯಾದೆಯೊಂದಿಗೆ ನೋಡಿಕೊಳ್ಳುತ್ತಿದೆ.
ಹಾಗೇ ಸುರಕ್ಷತೆಗೆ ಮಹತ್ವ ಕೊಡುವ ಅಮೆರಿಕಾಕ್ಕೇ (೯೧೧ ಗೇ??) ಸವಾಲೊಡ್ಡುವಂತೆ ೨೦೦೧ರ ೯/೧೧ ರಂದು ಬಿನ್ ಲಾಡೆನ್ ಅಮೇರಿಕಾವನ್ನು ಬೆಚ್ಚಿಬೀಳಿಸಿದ್ದ್ದುವಿಪರ್ಯಾಸ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: