Posted by: ರಮ್ಯ | ಫೆಬ್ರವರಿ 4, 2011

ಪಾರ್ಕ್ ನಲ್ಲಿ ‘ಕನ್ನಡದ ದನಿ’

ಪ್ರತಿದಿನ ಮನೆಯ ಹತ್ತಿರವಿರುವ ಪಾರ್ಕ್ ನಲ್ಲಿ ೧ ರೌಂಡ್ ವಾಕ್ ಹೋಗುವುದು ರೂಡಿ. ‘ಹಾಯ್’ ಹೇಳಿದವರಿಗೆ ‘ಹಾಯ್’ ಹೇಳಿ, ‘ಸ್ಮೈಲ್’ ಕೊಟ್ಟವರಿಗೆ ‘ಸ್ಮೈಲ್’ ಕೊಡುವುದು ಬಿಟ್ಟರೆ ನಾನಾಗಿ ಬೇರೆಯವರನ್ನು ಪರಿಚಯ ಮಾಡಿಕೊಂಡಿದ್ದು ಅಪರೂಪ. ‘ಮಾತಾಡುತ್ತಾರೂ ಇಲ್ಲವೂ’ ಎಂಬ ಹಿಂಜರಿಕೆ.  ಹೀಗಿದ್ದರೂ  ಎಲ್ಲಾದರೂ ಅಪರೂಪಕ್ಕೆ ಅಂಗಡಿ, ಹೋಟೆಲ್ ಗಳಲ್ಲಿ ಕನ್ನಡದ ಮಾತು ಕೇಳಿದರೆ ನಾನಾಗಿ ಹೋಗಿ ಪರಿಚಯಿಸಿಕೊಳ್ಳುತ್ತೇನೆ.

ಮನೆಯ ಸಮೀಪದ ಪಾರ್ಕ್

ಪಾರ್ಕ್ ನಲ್ಲೊಂದು ಸಂಜೆ..

ಎಂದಿನಂತೆ ಪಾರ್ಕ್ ನಲ್ಲಿ ಹೋಗ್ತಾ ಇದ್ದೆ.

‘ನೀವು ಭಾರತದವರಾ?’ ಹಿಂದಿನಿಂದ ಕನ್ನಡದ ದ್ವನಿ. ಆಶ್ಚರ್ಯದಿಂದ ಹಿಂದಿರುಗಿ ನೋಡಿದೆ. ಸುಮಾರು ೫೦ರ ಆಸುಪಾಸಿನ ಮಹಿಳೆ. ‘ಹೌದು ಕನ್ನಡದವಳೇ’ ಕನ್ನಡದಲ್ಲೇ ಉತ್ತರಿಸಿದೆ.

೧೦ ನಿಮಿಷದಲ್ಲಿ ನನ್ನ ಕುಲ, ಗೋತ್ರ ಎಲ್ಲ ವಿಚಾರಿಸಿಯಾಗಿತ್ತು. ಹುಟ್ಟಿದ್ದು, ಕೊಟ್ಟಿದ್ದು, ಗಂಡ, ಮಕ್ಕಳು, ಕೆಲಸ ಹೀಗೆ ಸಾಗಿತ್ತು ವಿಚಾರಣೆ. ಅವರು ಬೆಂಗಳೂರಿನವರು. ಮಗನ ಮನೆಗೆ ಬಂದಿದ್ದರು. ನಾನು ಬೆಂಗಳೂರಿನಲ್ಲಿದ್ದಾಗ ಅವರ ಮನೆಗೆ ಸಮೀಪದಲ್ಲೇ ಇದ್ದೆ. ಹೀಗಾಗಿ ನಮ್ಮ ಏರಿಯದವಳೇ ಅಂತ ಅವರಿಗೆ ಸಂತೋಷವಾಗಿತ್ತು. ಪ್ರತಿದಿನ ಪಾರ್ಕ್ ನಲ್ಲಿ ನಮ್ಮ ಬೇಟಿಯಾಗುತ್ತಿತ್ತು.

ನಂತರ ಕೆಲವು ದಿನಗಳ ಕಾಲ ನಾನು ಪಾರ್ಕ್ ಗೆ ಹೋಗಲು ಆಗಲಿಲ್ಲ. ಪಾರ್ಕ್ ಗೆ ಹೋದಾಗ ಮತ್ತೆ ಆಂಟಿ ಯನ್ನು ಬೇಟಿ ಮಾಡಿದೆ. (ನನ್ನನ್ನು ಹುಡುಕಿಕೊಂಡು ನಮ್ಮ ಅಪಾರ್ಟ್ಮೆಂಟ್ ಗೂ ಬಂದಿದ್ದರಂತೆ. ಆದರೆ ನನ್ನ ಮನೆ ನಂಬರ್ ಅವರಿಗೆ ಗೊತ್ತಿರಲಿಲ್ಲ). ಅಲ್ಲಿ ಅವರೊಂದಿಗೆ ಇನ್ನೂ ಅನೇಕ ಜನರಿದ್ದರು. ಅವರೆಲ್ಲರಿಗೂ ನನ್ನನ್ನೂ, ನನಗೆ ಅವರೆಲ್ಲರನ್ನೂ ಪರಿಚಯ ಮಾಡಿಸಿದರು. ಇವರಿಗೆ ರಾಜಾಜಿನಗರ, ಇವರು ಜಯನಗರ, ಇವರು ತಮಿಳು ನಾಡಿನವರು, ಇವರು ಪಂಜಾಬ್ ನವರು ಹೀಗೆ ಸಾಗಿತ್ತು ಪರಿಚಯ. ಸುಮಾರು ೧೫ ದಿನಗಳಲ್ಲಿ ಅಲ್ಲೊಂದು ಪುಟ್ಟ ಭಾರತ ಸಂಘವೇ ಆಗಿತ್ತು.

ಅವರ ದೈರ್ಯ, ಸಂಗಟನಾ ಚಾತುರ್ಯಕ್ಕೆ ಮೆಚ್ಚಿದೆ. ಕನ್ನಡ ಬಿಟ್ಟು ಬೇರೇ ಭಾಷೆ ಗೊತ್ತಿರದ ಆಂಟಿ ಪಾರ್ಕ್ ಗೆ ಬಂದ ಎಲ್ಲರನ್ನೂ ಕನ್ನಡದಲ್ಲೇ ಪರಿಚಯ ಮಾಡಿಕೊಂಡಿದ್ದರು. ಇವರು ಕನ್ನಡದಲ್ಲಿ ಮಾತಾಡುವುದು, ಕನ್ನಡ ಬರದೇ ಇರುವವರು ಅವರ ಭಾಷೆ ಯಲ್ಲಿ ಉತ್ತರಿಸುವುದು ಸಾಮಾನ್ಯವಾಗಿತ್ತು. ಯಾರಿಗೆ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ….smile

ಹೀಗೆ ಸುಮಾರು ೬ ತಿಂಗಳ ಕಾಲ ಪಾರ್ಕ್ ನಲ್ಲಿ ಕನ್ನಡದ ಕಂಪು ಹರಡುವಲ್ಲಿ ಅವರು ಯಶಸ್ವಿಯಾಗಿದ್ದರು. ಭಾರತಕ್ಕೆ ವಾಪಾಸಾಗುವ ಹಿಂದಿನ ದಿನ ಆಂಟಿ ಎಲ್ಲರ ಮನೆಗೂ ಬೇಟಿ ಕೊಟ್ಟಿದ್ದು ವಿಶೇಷವಾಗಿತ್ತು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: