Posted by: ರಮ್ಯ | ಜನವರಿ 11, 2012

ಹವಾ ‘ಹವಾಯಿ’ – ಭಾಗ ೧

ಅಮೇರಿಕ(USA)ದ ೫೦ ರಾಜ್ಯಗಳಲ್ಲಿ ‘ಹವಾಯಿ’ಯೂ ಒಂದು. ಹವಾಯಿ ಪೆಸಿಫಿಕ್ ಸಮುದ್ರದ ಮದ್ಯಭಾಗದಲ್ಲಿರುವ ದ್ವೀಪ ಸಮೂಹ. Kauai, Oahu, Maui, Big Island ಇವು ನಾಲ್ಕು ಪ್ರಮುಖ ದ್ವೀಪಗಳು.

ಫೆಬ್ರುವರಿ 2011 ಏಳು ದಿನಗಳ ಪ್ರವಾಸಕ್ಕಾಗಿ ಹವಾಯಿಗೆ ಹೊರಟೆವು. ಮಾಯಿ(Maui) ಮತ್ತು ಬಿಗ್ ಐಲೆಂಡ್ ಗೆ ಬೇಟಿಕೊಡುವುದೆಂದು ನಿರ್ಧರಿಸಿದ್ದೆವು. ಸ್ಯಾನ್ ಫ್ರಾನ್ಸಿಸ್ಕೋ ದಿಂದ ಸುಮಾರು ಐದು ಗಂಟೆ ಪ್ರಯಾಣ. ಹವಾಯಿ ಸಮಯಕ್ಕೂ ನಮಗೂ(PST) ಎರಡು ಗಂಟೆ ವ್ಯತ್ಯಾಸ. ಮೊದಲು ಬೇಟಿ ಕೊಟ್ಟಿದ್ದು ಮಾಯಿ(Maui). ಏರ್ಪೋರ್ಟ್ ನಿಂದ ಕಾರ್ ರೆಂಟಲ್ ಪಡೆಯಲು ಹೋದಾಗ ಅಲ್ಲಿ ಕೋಳಿಗಳನ್ನು ನೋಡಿ ಆಶ್ಚರ್ಯವಾಗಿತ್ತು. ಅಲ್ಲಿ ಕೋಳಿಗಳು ಸ್ವಚಂದವಾಗಿ ಓಡಾಡಿಕೊಂಡಿದ್ದವು. ಇದುವರೆಗೂ ಅಮೇರಿಕಾದಲ್ಲಿ ಎಲ್ಲೂ ಇಂತಹ ದೃಶ್ಯ ಕಂಡಿರಲಿಲ್ಲ. ಕಾರ್ ರೆಂಟಲ್ ಪಡೆಯಲು ಬಂದ ಅನೇಕರು ಕೋಳಿಗಳ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು.

ಕಾರ್ ಪಡೆದುಕೊಂಡು ಸಮೀಪದಲ್ಲಿದ್ದ kmart ನಲ್ಲಿ ನಮಗೆ ಅಗತ್ಯವಿದ್ದ ವಸ್ತುಗಳನ್ನು ತುಂಬಿಕೊಂಡ ನಂತರ ನಮ್ಮ ಹವಾಯಿ ತಿರುಗಾಟ ಶುರುವಾಯ್ತು. ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್ ಇಷ್ಟ ಪಡದ ನನಗೆ ಅಲ್ಲಿರುವ ಏಳು ದಿನ ಬ್ರೆಡ್, ಜಾಮ್, ಜೂಸ್ ಗಳ ಮೃಷ್ಟಾನ್ನ ಭೋಜನ.smile emoticon

‘ಪ್ರವಾಸೋದ್ಯಮ’ ಹವಾಯಿಯ ಆದಾಯದ ಮೂಲ. ನೈಸರ್ಗಿಕ ಕಾಡುಗಳು, ಬೀಚ್ ಗಳು, ಅಗ್ನಿಪರ್ವತಗಳು ಪ್ರಮುಖ ಆಕರ್ಷಣೆಗಳು. ಅಮೆರಿಕಾದ ಇತರ ರಾಜ್ಯಗಳಿಗಿಂತ ಹವಾಯಿ ಭಿನ್ನವಾಗಿತ್ತು. ಕಣಗಿಲೆ, ಕರವೀರ, ಚದುರಂಗ  ಹೂಗಳೂ, ಪೇರಳೆ, ಪಪ್ಪಾಯಿ, ಬಾಳೆ, ಪರಂಗಿ, ನೇರಳೆ ಮರಗಳೂ, ಜಿನುಗುತ್ತಿರುವ ಮಳೆ ಅಮೇರಿಕಾದಲ್ಲೇ ‘ಊರಿಗೆ’ ಹೋದಂತ ಅನುಭವ ಕೊಟ್ಟಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲೇ ಒಂದು ಭಾರತೀಯ ರೆಸ್ಟೋರೆಂಟ್ ಸಿಕ್ಕಿತ್ತು. (ಒಂದು ಹೊತ್ತು ಬ್ರೆಡ್ ಜಾಮ್ ನಿಂದ ಮುಕ್ತಿ). ನಂತರ ಸಮೀಪದಲ್ಲಿದ್ದ ಕೆಲವು ಬೀಚ್ ಗಳಿಗೆ ಹೋಗಿ ‘ಸೂರ್ಯ ಸ್ನಾನsmile emoticon‘ ಮಾಡಿ ಹೋಟೆಲ್ ಗೆ ವಾಪಾಸಾಗಿದ್ದೆವು.

ಮೊದಲ ದಿನ ನಮ್ಮ ಪ್ರಯಾಣ ‘ರೋಡ್ ಟು ಹಾನ’ ಕ್ಕೆ. 42 ಮೈಲುಗಳ ಹಾನಾ ಹೈವೆ 500ಕ್ಕೂ ಹೆಚ್ಚು ತಿರುವುಗಳನ್ನೂ, 50ಕ್ಕೂ ಹೆಚ್ಚು ಒಂದು lane ಬ್ರಿಡ್ಜ್ ಗಳನ್ನೂ ಹೊಂದಿದೆ. ನೈಸರ್ಗಿಕ ಕಾಡುಗಳು, ಕಿರಿದಾದ ರಸ್ತೆಗಳು, ಜಲಪಾತಗಳು, ಸಮುದ್ರದ ರಮಣೀಯ ದೃಶ್ಯಗಳಿಗಾಗಿ ಪ್ರಸಿದ್ದ. ಆಧುನಿಕತೆಯಿಂದ ದೂರ ಉಳಿದಿದೆ. ಕೆಲವು ಚಿಕ್ಕ ಅಂಗಡಿಗಳನ್ನು ಬಿಟ್ಟರೆ ಬೇರೇನೂ ಕಾಣುವುದಿಲ್ಲ.

ಹಾನಾ ದಾರಿಯಲ್ಲಿ

ಎರಡನೇ ದಿನ ಮಾಲ್ ನಲ್ಲಿ ‘ಹೂಲ'(hula) ಡಾನ್ಸ್ ನೋಡುವ ಅವಕಾಶ ಸಿಕ್ತು. ‘ಹೂಲ’ ಹವಾಯಿಯ ಸಾಂಪ್ರದಾಯಿಕ ನೃತ್ಯ. ಅಲ್ಲಿಂದ ನೇರವಾಗಿ ಹೋಗಿದ್ದು ಮೊದಲೇ ಬುಕ್ ಮಾಡಿದ್ದ ‘ತಿಮಿಂಗಿಲ ದರ್ಶನಕ್ಕೆ’ (Whale watching).

ಬೋಟ್ನಲ್ಲಿ ಸುಮಾರು ೨ ಗಂಟೆ ಪ್ರಯಾಣದಲ್ಲಿ  ತಿಮಿಂಗಿಲಗಳನ್ನು ತೋರಿಸುತ್ತ, ಅವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತ ಸಾಗುತ್ತಾರೆ. ಅಲ್ಲಿ ಹೇಳಿದ ಕೆಲವು ಮಾಹಿತಿಗಳು.

  • ಈ ತಿಮಿಂಗಿಲಗಳು(Humpback whales) ಚಳಿಗಾಲ ಪ್ರಾರಂಭವಾಗುವುದಕ್ಕೆ ಮೊದಲು ಅಲಾಸ್ಕ(Alaska)ದಿಂದ ವಲಸೆ ಹೊರಡುತ್ತವೆ. ಇವುಗಳಲ್ಲಿ ಹೆಚ್ಚಿನವು(60%) ಹವಾಯಿಗೆ ಬಂದರೆ ಉಳಿದವು ಮೆಕ್ಸಿಕೋ (coast of Baja in Mexico) ಹಾಗೂ ಜಪಾನ್(islands south east of Japan) ಕಡೆ ಹೋಗುತ್ತವೆ.
  • 6 ರಿಂದ 8 ವಾರ ಪ್ರಯಾಣ ಮಾಡಿ ಅಲಾಸ್ಕದಿಂದ ಸುಮಾರು 3500 ಮೈಲು ದೂರದಲ್ಲಿರುವ ಹವಾಯಿ ತಲುಪುತ್ತವೆ.
  • ಸುಮಾರು 40 ಟನ್ ತೂಕ ಹಾಗು 40-45 ಅಡಿ ಉದ್ದ ಇರುತ್ತವೆ.
  • ಏಪ್ರಿಲ್ ನಲ್ಲಿ ಮತ್ತೆ ಅಲಾಸ್ಕಕ್ಕೆ ವಾಪಾಸಾಗುತ್ತವೆ. ಹವಾಯಿ ಪೆಸಿಫಿಕ್ ಸಮುದ್ರದ ಮದ್ಯದಲ್ಲಿರುವುದೂ, ಸತ್ವರಹಿತವಾದ ನೀರು(ಇದೇ ಕಾರಣಕ್ಕೆ ಇಲ್ಲಿನ ಸಮುದ್ರದ ನೀರು ತಿಳಿ ನೀಲಿಯಾಗಿರುತ್ತದೆ) ಇವುಗಳಿಗೆ ವರ್ಷಪೂರ್ತಿ ಆಹಾರ ಒದಗಿಸುವಲ್ಲಿ ವಿಫಲವಾಗಿದೆ. ಒಂದು ತಿಮಿಂಗಿಲಕ್ಕೆ ದಿನಕ್ಕೆ ಸುಮಾರು 900 kg ಗಿಂತ ಜಾಸ್ತಿ ಆಹಾರ ಬೇಕು.
  • ಹವಾಯಿಯಲ್ಲಿರುವ 4 ರಿಂದ 6 ತಿಂಗಳು ಇವು ಉಪವಾಸ ಇರುತ್ತವೆ.

ತಿಮಿಂಗಿಲ!!

ಮೂರನೇ ದಿನ ಬೆಳಿಗ್ಗೆ ಬೇಗ ಎದ್ದು ಬಹಳ ದಿನಗಳಿಂದ ಎದುರು ನೋಡುತ್ತಿದ್ದ ‘snorkeling’ ಗೆ ಹೋದೆವು. ಬೋಟ್ ನಲ್ಲಿ ನಮ್ಮನ್ನು ಚಿಕ್ಕ ದ್ವೀಪ ‘ಮೂಲೋಕಿನಿ’ (Molokini)ಗೆ ಕರೆದೊಯ್ದರು. ಹವಾಯಿ ಯಲ್ಲಿ ಸುಮಾರು 120 ಜಾತಿಯ ಮೀನುಗಳನ್ನು ಕಾಣಬಹುದು. ‘ಮೂಲೋಕಿನಿ’ ವಿವಿಧ ಬಗೆಯ ಜಲಚರಗಳಿಂದ ಸಮೃದ್ದವಾಗಿರುವುದೂ, ತಿಳಿ ನೀರು snorkeling ಮತ್ತು scuba ಗೆ ತುಂಬಾ ಪ್ರಶಸ್ತವಾಗಿದೆ. ಹೊಸ ಅನುಭವ ಪಡೆಯುವ ಹುಮ್ಮಸ್ಸಿನಲ್ಲಿ ಅಗತ್ಯವಿರುವ equipment ಧರಿಸಿ ತಯಾರಾದೆವು. ಈಜು ಬರದಿದ್ದರೂ ಚಳಿ (ಭಯ) ಬಿಟ್ಟು ನೀರಿಗಿಳಿದೆವು.(ಮನೆಗೆ ಬಂದು ಒಂದು ವಾರ ಜ್ವರದಿಂದ ಮಲಗಿದ್ದು ಬೇರೇ ವಿಷಯsmile emoticon) ಚಿಕ್ಕ ಮಕ್ಕಳಿಗೂ ಈಜು ಬರುವ ಈ ದೇಶದಲ್ಲಿ ಈಜು ಬರದ ನಾವು ಅಲ್ಪಸಂಖ್ಯಾತರಾಗಿದ್ದೆವು. 4-5 ಜನ instructors ಅಗತ್ಯವಿದ್ದಲ್ಲಿ ಸಹಾಯಕ್ಕೆ ರೆಡಿ ಇದ್ದರು.(ಅದೇ ದೈರ್ಯsmile emoticon). ವಿವಿಧ ಜಾತಿಯ, ಆಕಾರದ, ಬಣ್ಣದ ಮೀನುಗಳು. ಸಮುದ್ರದ ತಳದಲ್ಲಿ ಗೋಚರಿಸುವ ವಿವಿಧ ಬಗೆಯ ಸಸ್ಯಗಳು. ನೋಡುತ್ತಾ ನೋಡುತ್ತಾ ಬೋಟ್ ನಿಂದ ಸುಮಾರು ದೂರ ಹೋಗಿ ಆಗಿತ್ತು. ಸಮಯ ಹೋಗಿದ್ದೇ ತಿಳಿಯಲಿಲ್ಲ. ಅಲ್ಲಿಂದ ಮತ್ತೆ ಬೋಟ್ ನಲ್ಲಿ ‘turtle town’ ಗೆ ಕರೆದೊಯ್ದರು. ಅಲ್ಲಿ ಮತ್ತೆ ನೀರಿಗಿಳಿದು ‘ದೈತ್ಯ ಆಮೆ'(Hawaiian green sea turtle)ಗಳನ್ನು ನೋಡಿದೆವು. ವಾಪಾಸಾದಾಗ ಮದ್ಯಾಹ್ನ ಒಂದು ಗಂಟೆಯಾಗಿತ್ತು.

Molokini

'ಮೂಲೋಕಿನಿ' (Photo: Ron Garnett/HTA)

ಅಲ್ಲಿಂದ ‘ಹಲೆಯಕಾಲ(Haleakala) ನ್ಯಾಷನಲ್ ಪಾರ್ಕ್’ ಗೆ ಹೊರಟೆವು. 30,000 ಎಕರೆ ಇರುವ ಹಲೆಯಕಾಲ ನ್ಯಾಷನಲ್ ಪಾರ್ಕ್ ಸಮುದ್ರ ಮಟ್ಟದಿಂದ 10,023 ಅಡಿ ಎತ್ತರದಲ್ಲಿದೆ.  ಬದಲಾಗುವ ಹವಾಮಾನದಲ್ಲಿ ಮೋಡಗಳ ನಡುವೆ ಈ ವೋಲ್ಕೆನೋ ತುದಿ ತಲುಪುವುದು ರೋಮಾಂಚಕಾರಿ ಅನುಭವ. ಸುಮಾರು 4,000,000 ವರ್ಷಗಳ ಹಿಂದೆ ಸಿಡಿದು ಶಾಂತವಾಗಿರುವ ಈ ಅಗ್ನಿಪರ್ವತ ‘ಮಾಯಿ’ಯ ಅತೀ ಎತ್ತರದ ಪ್ರದೇಶ.  ಇದಕ್ಕೆ ‘ಸೂರ್ಯನ ಮನೆ’ ಎಂದೂ ಕರೆಯುತ್ತಾರೆ. (ಹವಾಯಿ ಭಾಷೆಯಲ್ಲಿ ‘Haleakala’ ಎಂದರೆ ‘house of the sun’).

ಹಲೆಯಕಾಲ ನ್ಯಾಷನಲ್ ಪಾರ್ಕ್

ಸಂಜೆ 6 ಗಂಟೆ ಫ್ಲೈಟ್ ಗೆ ನಾವು ಬಿಗ್ ಐಲೆಂಡ್ ಗೆ ಹೋಗಬೇಕಾಗಿತ್ತು.  ‘ಹಳೆಯಕಾಲ’ದಿಂದ ಸುಮಾರು 30 ಮೈಲು ದೂರ ಇರುವ ಕಾರ್ ರೆಂಟಲ್ ತಲುಪಿದಾಗ 4.45 ಆಗಿತ್ತು.

ಗಡಿಬಿಡಿಯಲ್ಲಿ ರೆಂಟಲ್ ಕಾರ್ ವಾಪಾಸು ಮಾಡಿ ನಮ್ಮ ಲಗೇಜ್ ಎತ್ತಿಕೊಂಡು ಏರ್ಪೋರ್ಟ್ ಗೆ ಹೋಗುವ ವಾಹನ ಹತ್ತಿದೆವು. ಚಾಲಕನಿಗೆ ನಾವು ಹೋಗುವ ವಿಮಾನದ ಕಂಪನಿಯ ಹೆಸರನ್ನು ತಿಳಿಸಿದೆವು. ಆಗಲೇ ಗಂಟೆ ಐದಾಗಿತ್ತು. ಏರ್ಪೋರ್ಟ್ ನ ಸೆಕ್ಯೂರಿಟಿ ಕ್ಯೂ ನೆನಪಿಸಿಕೊಂಡಾಗ ನಾವು ಫ್ಲೈಟ್ ತಪ್ಪಿಸಿಕೊಳ್ಳುವ ಸಂಭವವೇ ಹೆಚ್ಚು ಅನಿಸುತ್ತಿತ್ತು. ನಮ್ಮ ವಾಹನ ಮೈನ್ ಏರ್ಪೋರ್ಟ್ ದಾಟಿ ಮುಂದೆ ಹೋಗುತ್ತಲಿತ್ತು. ಚಾಲಕನನ್ನು ವಿಚಾರಿಸಿದಾಗ ನಿಮ್ಮ ಫ್ಲೈಟ್ ಮುಂದೆ ಸಿಗುತ್ತದೆ ಎಂದ. ನಮ್ಮ ಭಾಷೆ ಅವನಿಗೆ ಅರ್ಥವಾಗಿದೆಯೋ ಇಲ್ಲವೋ? ಅನುಮಾನವಾಯ್ತು. ‘ನಮಗೆ 6 ಕ್ಕೆ ಬಿಗ್ ಐಲೆಂಡ್ ಗೆ ಹೊರಡುವ ವಿಮಾನಕ್ಕೆ ಹೋಗಬೇಕೆಂದೂ, ವಿಮಾನದ ಕಂಪನಿಯ ಹೆಸರನ್ನೂ’ ಮತ್ತೆರಡು ಬಾರಿ ಹೇಳಿದೆವು. ನಮ್ಮ ಆತಂಕ ಅರ್ಥ ಮಾಡಿಕೊಂಡ ಅವನು ‘ನಾವು  ಹೋಗುತ್ತಿರುವುದು ೮-೯ ಜನ ಹೋಗುವ ಚಿಕ್ಕ ಫ್ಲೈಟ್ ಎಂದೂ, ಅದು ಬೇರೆ ನಿಲ್ದಾಣದಿಂದ ಹೊರಡುವುದೆಂದೂ’ ತಿಳಿಸಿದ. ಆದರೆ ನಮ್ಮ ಆತಂಕ  ಕಡಿಮೆಯಾಗಲಿಲ್ಲ. ನಮ್ಮ ನಿಲ್ದಾಣದ ಬಳಿ ವಾಹನ ನಿಲ್ಲಿಸಿದ. ಆ ನಿಲ್ದಾಣ ಬಸ್ ಸ್ಟಾಪ್ ನ್ನು ಹೋಲುವಂತಿತ್ತು. ಸರಿ ವಿಚಾರಿಸೋಣ ಎಂದು ಒಳಹೊಕ್ಕೆವು. ಅಲ್ಲಿ 4-6 ಜನ ಪ್ರಯಾಣಿಕರಿದ್ದರು. ಕೌಂಟರ್ ನಲ್ಲಿ ವಿಚಾರಿಸಿದಾಗ ನಾವು ಸರಿಯಾದ ನಿಲ್ದಾಣಕ್ಕೆ ಬಂದಿದ್ದು ಖಾತ್ರಿಯಾಯ್ತು. ನಮ್ಮ ಲಗೇಜ್ ನೊಂದಿಗೆ ನಮ್ಮನ್ನೂ ತೂಕ ಮಾಡಿsmile emoticon, ಫ್ಲೈಟ್ ಇನ್ನೂ ಬಂದಿಲ್ಲವೆಂದು ಕುಳಿತುಕೊಳ್ಳಲು ಹೇಳಿದರು. ಯಾವುದೇ ಸೆಕ್ಯೂರಿಟಿ ಚೆಕ್ ಇರಲಿಲ್ಲ. ಆಶ್ಚರ್ಯವಾದರೂ ಸದ್ಯ ನಾವು ‘ಸೇಫ್’ ಎಂದು ನೆಮ್ಮದಿಯಿಂದ ಕುಳಿತೆವು. ಅಷ್ಟರಲ್ಲಿ ವಿಮಾನ ಲ್ಯಾಂಡ್ ಆಯ್ತು. ಪೈಲೆಟ್ ಅನುಮತಿ ಪಡೆದು ಒಂದೆರಡು ಫೋಟೋನೂ ತೆಗೆದಾಯ್ತು.

ನಮ್ಮ ಫ್ಲೈಟ್..

ಮಾಯಿಯಿಂದ ಬಿಗ್ ಐಲೆಂಡ್ ಗೆ ಅರ್ಧ ಗಂಟೆ ಪ್ರಯಾಣ. ಕೇವಲ ಅರ್ಧ ಗಂಟೆ ಮುಂಚೆ ವಿಮಾನ ನಿಲ್ದಾಣ ತಲುಪಿದರೂ, ಫ್ಲೈಟ್ ಹತ್ತುವಲ್ಲಿ ಯಶಸ್ವಿಯಾಗಿದ್ದೆವು. 8 ಪ್ರಯಾಣಿಕರಿರುವ ಆ ಚಿಕ್ಕ ವಿಮಾನದಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತೆವು. ಸ್ವಲ್ಪ ಸಮಯದ ನಂತರ ದೂರದಲ್ಲಿ ಬಿಗ್ ಐಲೆಂಡ್ನ ದೀಪಗಳು ಗೋಚರಿಸತೊಡಗಿದವು. ಆ ನಿಲ್ದಾಣದಲ್ಲೂ ನಮ್ಮ ಫ್ಲೈಟ್ ನವರನ್ನು ಬಿಟ್ಟರೆ ಬೇರೆ ಜನರಿರಲಿಲ್ಲ. ರೆಂಟಲ್ ಕಾರ್ ಪಡೆದು ಹೋಟೆಲ್ ತಲುಪಿದಾಗ ರಾತ್ರಿ 8.30.

ಹೆಚ್ಚಿನ ಫೋಟೋಗಳನ್ನು ಇಲ್ಲಿ ನೋಡಿ Hawaii photos


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: