Posted by: ರಮ್ಯ | ಜನವರಿ 24, 2012

ಹವಾ ‘ಹವಾಯಿ’ – ಭಾಗ ೨

‘ಬಿಗ್ ಐಲೆಂಡ್’ ಹೆಸರೇ ಸೂಚಿಸುವಂತೆ ಹವಾಯಿ ದ್ವೀಪ ಗಳಲ್ಲೆಲ್ಲ ಅತೀ ದೊಡ್ಡದು. ಇದು ಅಮೇರಿಕಾದ (USA) ದೊಡ್ಡ ದ್ವೀಪವೂ ಸಹ. ಸುಮಾರು 2,30,000 ಎಕರೆ ಇರುವ ‘ಹವಾಯಿ ವೋಲ್ಕೆನೋ ನ್ಯಾಷನಲ್ ಪಾರ್ಕ್’ ಇಲ್ಲಿನ ಪ್ರಮುಖ ಆಕರ್ಷಣೆ.
ಮೊದಲ ದಿನ ನಮ್ಮ ಪ್ರಯಾಣ ‘ಹವಾಯಿ ವೋಲ್ಕೆನೋ ನ್ಯಾಷನಲ್ ಪಾರ್ಕ್’ ನತ್ತ. ವಿಸಿಟರ್ ಸೆಂಟರ್ ನಲ್ಲಿ ಸ್ವಲ್ಪ ಮಾಹಿತಿ ಪಡೆದು ಪಾರ್ಕ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಚೈನ್ ಆಫ್ ಕ್ರೆಟರ್ಸ್ ರೋಡ್’ (Chain of Craters Road) ನಲ್ಲಿ ಹೊರಟೆವು. ಲಾವಾದ ಅವಶೇಷಗಳ ನಡುವೆ 11 ಮೈಲು ಸಾಗುವ ಈ ದಾರಿ ಸಮುದ್ರ ಮಟ್ಟದವರೆಗೆ ಕರೆದೊಯುತ್ತದೆ. 2008ರಲ್ಲಿ ಹರಿದ ಲಾವಾ ಅಲ್ಲಿ ರಸ್ತೆಯನ್ನು ನಾಶ ಮಾಡಿದೆ.

ರೋಡಿಗೆ ಬಂದ ಲಾವಾ


'ವೋಲ್ಕೆನೋ' ಆರ್ಚ್

Thurston ಲಾವಾ ಟ್ಯೂಬ್ ನೋಡಿ ಹೊರಟಾಗ ಸಂಜೆಯಾಗಿತ್ತು.

Thurston ಲಾವಾ ಟ್ಯೂಬ್

ಅಲ್ಲಿಂದ Jaggar ಮ್ಯೂಸಿಯಂಗೆ ಹೋದಾಗ ಆಗಲೇ ಅಲ್ಲಿ ತುಂಬಾ ಜನ ಸೇರಿದ್ದರು. ಅದು ‘Kilauea volcano’ ವೀಕ್ಷಣೆಗೆ ಸೂಕ್ತ ಜಾಗ. (Halemaumau Crater Lookout)
‘Kilauea volcano’ ಪ್ರಪಂಚದ ಕೆಲವೇ ಜೀವಂತ ಅಗ್ನಿಪರ್ವತಗಳಲ್ಲಿ ಇದೂ ಒಂದು. ಜನವರಿ 1983ರಿಂದ ಸಿಡಿಯುತ್ತಿರುವ ಈ ಅಗ್ನಿಪರ್ವತ ಸುಮಾರು 16,000 ಎಕರೆ ಜಾಗವನ್ನು ಆವರಿಸಿದೆ. ಅನೇಕ ಮನೆಗಳನ್ನೂ, ಸಾವಿರಾರು ಎಕರೆ ಅರಣ್ಯವನ್ನೂ ನಾಶ ಮಾಡಿದೆ. ಇದರಿಂದ ಹರಿದ ‘ಲಾವಾ’ ಸುಮಾರು 560 ಎಕರೆಗಳಷ್ಟು ಜಾಗವನ್ನು ‘ಬಿಗ್ ಐಲ್ಯಾಂಡ್’ ಗೆ ಸೇರಿಸಿದೆ.

View from 'Halemaumau Crater Lookout'

ಇದರಲ್ಲಿ ಅಗ್ನಿ ದೇವತೆ ‘ಪೀಲೆ'(Pele) ನೆಲೆಸಿದ್ದಾಳೆ ಎಂದು ಹವಾಯಿ ಜನರ ನಂಬಿಕೆ. ಅಲ್ಲಿಗೆ ಬಂದ ಶಾಲಾ ಮಕ್ಕಳ ಗುಂಪೊಂದು ‘ಪೀಲೆ’ಗೆ ಪ್ರಾರ್ಥನೆ ಸಲ್ಲಿಸಿತ್ತು.(ಹವಾಯಿ ಹಾಡು ಇಲ್ಲಿ ಕೇಳಿ) 2-3 ಗಂಟೆ ವೋಲ್ಕೆನೋ ನೋಡಿ ಹೋಟೆಲ್ ಗೆ ವಾಪಸಾದಾಗ ರಾತ್ರಿ 12 ಗಂಟೆಯಾಗಿತ್ತು.
ಎರಡನೇ ದಿನ ಕೆಲವು ಬೀಚ್ ಹಾಗು ಪಾರ್ಕ್ ಗಳನ್ನು ನೋಡಿ ‘ಚೈನ್ ಆಫ್ ಕ್ರೆಟರ್ಸ್ ರೋಡ್’ನ ಮತ್ತೊಂದು ತುದಿ ತಲುಪಿದೆವು. 1990 ರಲ್ಲಿ ಹರಿದ ಲಾವಾ ‘ಕಲಪನ'(Kalapana Village) ಊರನ್ನು ನಾಶ ಮಾಡಿದೆ. ಸುಮಾರು 50 ಅಡಿ ಲಾವಾ ಮೇಲೆ ಕಟ್ಟಿದ ಕೆಲವು ಮನೆಗಳನ್ನೂ ಈಗಲ್ಲಿ ಕಾಣಬಹುದು.

'ವೋಲ್ಕೆನೋ' ಅವಶೇಷಗಳ ನಡುವೆ(ಮೇಲೆ) ಮನೆಗಳು

ಅಲ್ಲಿ ಒಂದು ನೇರಳೆ(?) ಮರವೂ ಇತ್ತು. ದೈರ್ಯ ಮಾಡಿ 5-6 ಹಣ್ಣು ಕಿತ್ತು ತಿಂದು ಅದು ‘ನೇರಳೆ’ ಹಣ್ಣೆ ಎಂದು confirm ಮಾಡಿಕೊಂಡು ಅಲ್ಲಿಂದ ಹೊರಟೆವು.
3.30ಕ್ಕೆ ‘ವೋಲ್ಕೆನೋ ಹೆಲಿಕಾಪ್ಟರ್ ಟೂರ್’ಗೆ ಹೋಗಬೇಕಿತ್ತು. ಹೆಲಿಪ್ಯಾಡ್ ದಾರಿ ಹಿಡಿದೆವು. ಅಷ್ಟರಲ್ಲಿ ಫೋನ್ ರಿಂಗ್ ಆಗಿತ್ತು. ಹವಾಮಾನ ವೈಪರಿತ್ಯ ದಿಂದಾಗಿ ನಾವು ಹೋಗಬೇಕಿರುವ ಹೆಲಿಕಾಪ್ಟರ್ ರದ್ದಾಗಿದೆ ಎಂದು ತಿಳಿದಾಗ ನಿರಾಸೆಯಾಗಿತ್ತು. ಬೇರೆ ದಾರಿ ಇರಲಿಲ್ಲ. ಹೆಲಿಕಾಪ್ಟರ್ ನಲ್ಲಿ ವೋಲ್ಕೆನೋ ನೋಡುವ ಆಸೆ ಬಿಟ್ಟು ಸಮೀಪದಲ್ಲಿದ್ದ ‘Mauna Loa’ ಮಕಡಮೆಯ ನಟ್ ಫ್ಯಾಕ್ಟರಿಗೆ ಹೋದೆವು. ಅಲ್ಲಿ ಮೊದಲ ಬಾರಿ ಸಮುದ್ರ ಜೀವಿಯ ಒಳಗೆ ಇರುವ ‘ಮುತ್ತಿನ’ ದರ್ಶನವಾಯ್ತು.

ಸಮುದ್ರ ಜೀವಿಯ ಒಳಗೆ ಇರುವ 'ಮುತ್ತು'

7 ದಿನಗಳ ಹವಾಯಿ ಪ್ರವಾಸ ಮುಗಿಸಿ ರಾತ್ರಿ 12 ಗಂಟೆಗೆ ಫ್ಲೈಟ್ ಹತ್ತಿದಾಗ ಮನಸ್ಸಿನ್ನೂ ‘ವೋಲ್ಕೆನೋ’ ಸುತ್ತ ಸುತ್ತುತ್ತಿತ್ತು.
ಹೆಚ್ಚಿನ ಫೋಟೋಗಳನ್ನು ಇಲ್ಲಿ ನೋಡಿ Hawaii photos

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: