Posted by: ರಮ್ಯ | ಫೆಬ್ರವರಿ 25, 2012

(ಹಾಸ್ಯ)ಸಂಭಾಷಣೆಗಳು

ಸುಮಾರು 20 ವರ್ಷಗಳ ಹಿಂದೆ ಕೇಳಿದ ಕೆಲವು ಸಂಭಾಷಣೆ(ಅನುಭವ) ಗಳನ್ನು ಅವರದೇ ಭಾಷೆ/ಶೈಲಿಯಲ್ಲಿ ಹೇಳುವ ಪ್ರಯತ್ನ..

‘ಬನ್ಸ್ ತುಂಬಾ ಚೆನ್ನಾಗಿತ್ತು’ ಪೇಟೆಯಲ್ಲಿ ಒಂದು ಹೋಟೆಲ್ ನ ಎದುರಿಗೆ ಹೋಗುತ್ತಿದ್ದಾಗ ಹೋಟೆಲ್ ನಿಂದ ಹೊರಬರುತ್ತಿದ್ದ ಇಬ್ಬರು ವ್ಯಕ್ತಿಗಳ ಈ ಮಾತು ರಂಗಿ ಕಿವಿಗೆ ಬಿತ್ತು.
ರಂಗಿಗೂ ಆ ತಿಂಡಿಯ ರುಚಿ ನೋಡುವ ಮನಸ್ಸಾಯ್ತು. ಸರಿ, ಅದೇನೆಂದು ನೋಡೇಬಿಡುವ ಉತ್ಸಾಹದೊಂದಿಗೆ ಹೋಟೆಲ್ ಒಳ ಹೊಕ್ಕಳು.
ವೈಟರ್ ಬಳಿ ಕೇಳಿದಳು ‘ಮನ್ಸ್ ಐತಾ?’
ಕಿಲಾಡಿ ವೈಟರ್ ಉತ್ತರಿಸಿದ್ದ ‘ಮನ್ಸ್ ಐತೆ, ಆದರೆ ಈಗ ಪುರುಸೊತ್ತಿಲ್ಲ’smile emoticon
ತಾನು ಕೇಳಿಸಿಕೊಂಡಿದ್ದರಲ್ಲಿ ಏನೋ ಎಡವಟ್ಟಾಗಿರುವುದು ಅರಿವಾಗಿ, ಬನ್ಸ್ ತಿನ್ನದೇ ಹೊರಬಂದಿದ್ದಳು ರಂಗಿ.

ಯಾರೋ ಹೇಳಿದ್ದ / ಟಿವಿಯಲ್ಲಿ ನೋಡಿದ್ದ ಕ್ರೀಮ್ ಕೊಳ್ಳುವ ಮನಸ್ಸಾಗಿತ್ತು. ಎಷ್ಟು ಯೋಚಿಸಿದರೂ ಕ್ರೀಮ್ ಹೆಸರು ನೆನಪಿಗೆ ಬರಲಿಲ್ಲ. ಅಂಗಡಿಗೆ ಹೋದ ರಂಗಿ ಕೇಳಿದಳು ‘ಒಂದು ಪೇಸ್ಟ್ ಕೊಡ್ರಿ’
ಅಂಗಡಿಯವ ಎಲ್ಲಾ ಬ್ರಾಂಡಿನ, ಸೈಜಿನ ಟೂತ್ ಪೇಸ್ಟ್ ತೆಗೆದು ತೋರಿಸಿದ.
ಇದ್ಯಾವುದೂ ಅಲ್ಲವೆಂದ ರಂಗಿ ಕೊನೆಯಲ್ಲಿ ಹೇಳಿದಳು ‘ಮುಖಕ್ಕೆ ಹಚ್ಚುವ ಪೇಸ್ಟ್ ಕೊಡ್ರಿ’.smile emoticon (ಆಕೆಗೆ ಬೇಕಿದ್ದದ್ದು ಫೇರ್ & ಲವ್ಲೀ)

ಮಗನೊಂದಿಗೆ ಹೋಟೆಲ್ ಗೆ ಹೋದ ರಂಗಿ ೧ ಪ್ಲೇಟ್ ಇಡ್ಲಿ ಆರ್ಡರ್ ಮಾಡಿದಳು.
ರಂಗಿ: ಹುಟ್ಟು (ಸೌಟು) ಕೊಡ್ರಿ.
ವೈಟರ್: ಹುಟ್ಟು! ಯಾಕೆ?
ರಂಗಿ: ಇಡ್ಲಿ ತಿನ್ನಕ್ಕೆ.smile emoticon (ಚಮಚ ಬೇಕಿತ್ತು)

ಕ್ಷೌರಿಕ ತನ್ನ ಕೆಲಸ ಮಾಡುತ್ತ ಮನೆಯ ಯಜಮಾನನೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದ.
ಕ್ಷೌರಿಕ: ‘ಹೆಗಡೇರೆ ನಿಮ್ಮ ಮಗಳಿಗೊಂದು ಒಳ್ಳೆ ಗಂಡು ಹುಡುಕಿ. ಹುಡುಗ ಹೇಗಿರಬೇಕು ಗೊತ್ತಾ? ಕೈತೊಳೆದು ಮುಟ್ಟಂಗೆ ಇರ್ಬೇಕು.’
ಯಜಮಾನ: ????
ಆ ಸಮಯಕ್ಕೆ ಅಲ್ಲೇ ಇದ್ದ ಹಾಸ್ಯಪ್ರವೃತ್ತಿಯ ಸಂಬಂಧಿಕ ಕೇಳಿದ್ದ ‘ಕೈ ತೊಳೆದು ಮುಟ್ಟಬೇಕಾ? ಮುಟ್ಟಿದ ಮೇಲೆ ಕೈ ತೊಳೀಬೇಕಾ?’smile emoticon

Advertisements

« Newer Posts - Older Posts »

ವಿಭಾಗಗಳು